ಮನೆ ಮದ್ದು

ಆಸಿಡಿಟಿಯಾದಾಗ ನಿಂಬೆ ಹಣ್ಣಿನ ಶರಬತ್ ಮಾಡಿ ಕುಡಿದರೆ ಶೀಘ್ರ ಪರಿಹಾರ.
ಜೀರ್ಣ ಶಕ್ತಿ ಉತ್ತಮಗೊಳ್ಳಲು ಹಾಗೂ ಕೊಬ್ಬು ಶೇಖರಣೆಯಾಗದಿರಲು ದಿನವೂ ಬೆಳಿಗ್ಗೆ ಶುಂಟಿ ಹಾಕಿದ ಟೀ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಸೈನಸ್ ಸಮಸ್ಯೆಯಿಂದ ನರಳುತ್ತಿರುವವರಿಗೆ ದಿನವೂ ಒಂದು ಅಥವಾ ಎರಡು ಚಮಚ ಚ್ಯವನಪ್ರಾಶ ಸೇವನೆಯಿಂದ ಪರಿಹಾರ.
ನೆಲ್ಲಿಕಾಯಿಯನ್ನು ಆಗಾಗ ಸೇವಿಸುವುದರಿಂದ ಕೂದಲು ಬೇಗ ಬೆಳ್ಳಗಾಗುವುದಿಲ್ಲ.
ನಡೆದು ಸುಸ್ತಾಗಿದ್ದರೆ ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ಇಳಿಬಿಟ್ಟು ಹತ್ತು ನಿಮಿಷ ಕುಳಿತರೆ ಆಯಾಸ ಪರಿಹಾರ.
ಅತೀ ಹೆಚ್ಚು ಕೆಲಸ ಮಾಡಿ ಆಯಾಸವಾಗಿದ್ದರೆ ಬಿಸಿ ನೀರಿನ ಸ್ನಾನದಿಂದ ಸುಸ್ತು ಮಾಯ.
ವಾಂತಿ ಅಥವಾ ಅಜೀರ್ಣವಾದರೆ ಓಂ ಕಾಳಿನ ಕಷಾಯ ಮಾಡಿ ಕುಡಿದರೆ ಪರಿಹಾರ. ಅರ್ಧ ಗ್ಲಾಸ್ ನೀರಿಗೆ ಎರಡು ಚಿಟಿಕೆ ಓಂ ಕಾಳು ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಬೇಕಾದರೆ ಸ್ವಲ್ಪ ಸಕ್ಕರೆ ಬೆರೆಸಿ ಕುಡಿಯಬಹುದು.
ಆಸಿಡಿಟಿಗೆ ವೆನಿಲ್ಲಾ ಐಸ್ಕ್ರೀಂ ಇನ್ನೊಂದು ಒಳ್ಳೆಯ ಪರಿಹಾರ. ಬಡೆಸೋಪು ಕೂಡ ಉತ್ತಮ ಪರಿಹಾರ.
ಕಫದ ಕೆಮ್ಮು ಇದ್ದರೆ ಎರಡೂ ಹೊತ್ತು ಊಟದ ಬಳಿಕ ಒಂದೆರಡು ಚಮಚ ಜೇನುತುಪ್ಪ ಸೇವಿಸಿ.

ರಾತ್ರಿ ಹೊತ್ತು ಒಂದು ಚಮಚದಷ್ಟು ಮೆಂತೆ ಕಾಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಬಹುದು.

ದಿನವೂ ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮುನ್ನ ಖಾಲಿ ಹೊಟ್ಟೆಯಲ್ಲಿ ಎರಡು ಅಥವಾ ಮೂರು ಲೋಟಗಳಷ್ಟು ಬಿಸಿ ನೀರನ್ನು ಸೇವಿಸಿದರೆ ಹೊಟ್ಟೆಯ ಅನೇಕ ತೊಂದರೆಗಳಿಂದ ಮುಕ್ತಿ.

ಖಾರ ತಿಂದು ಹೊಟ್ಟೆ ಉರಿಯುತ್ತಿದ್ದರೆ ಎಳನೀರು ಅಥವಾ ಮಜ್ಜಿಗೆ, ಮೊಸರನ್ನು ಸೇವಿಸಿ.

ಹೊಟ್ಟೆಯ ತೊಂದರೆಗಳಿಗೆ ಪಪ್ಪಾಯಿ ಹಾಗೂ ಮುಳ್ಳು ಸೌತೆಕಾಯಿ, ಬೂದು ಕುಂಬಳ ಕಾಯಿ ರಾಮಬಾಣ.

ತಲೆಗೆ ವಾರಕ್ಕೊಮ್ಮೆಯಾದರೂ ಕೊಬ್ಬರಿ ಎಣ್ಣೆ ಹಾಕಿ ಮಸಾಜು ಮಾಡಿದರೆ ಕೂದಲು ಉದುರುವುದು, ಬೇಗನೆ ಬೆಳ್ಳಗಾಗುವುದು ಇತ್ಯಾದಿ ಸಮಸ್ಯೆಗಳು ಪರಿಹಾರ.
ನಿತ್ಯವೂ ಬಡೆಸೋಪನ್ನು ಕಾಲು ಚಮಚದಷ್ಟು ಜಗಿದು ತಿಂದರೆ ಕಣ್ಣಿನ ದೃಷ್ಟಿಯ ತೊಂದರೆ ಕಾಡುವುದಿಲ್ಲ.
ಮೈ ಮೇಲೆ ಕುರು ಎದ್ದು ನೋವಾಗುತ್ತಿದ್ದರೆ ಸ್ವಲ್ಪ ಬೆಣ್ಣೆ ಮತ್ತು ಕುಂಕುಮ ಮಿಶ್ರಣವನ್ನು ದಿನವೂ ಹಚ್ಚಿದರೆ ಕುರು ಬೇಗನೇ ಒಡೆದು ವಾಸಿಯಾಗುತ್ತದೆ.
ಉಗುರು ಸುತ್ತು _ ಉಗುರುನೋಯುತ್ತಿದ್ದರೆ ಒಂದು ಚಮಚ ಅಡುಗೆ ಎಣ್ಣೆಯಲ್ಲಿ ಒಂದು ಒಣ ಕೆಂಪು ಮೆಣಸಿನ ಕಾಯಿಯನ್ನು ಹುರಿದು ನಂತರ ಸ್ವಲ್ಪ ಬಿಸಿ ಇರುವಾಗಲೇ ಎಣ್ಣೆಯನ್ನು ಮಾತ್ರ ನೋವಿರುವ ಉಗುರಿ ಗೆ ಹಚ್ಚಿರಿ.

ಚಳಿಗಾಲದಲ್ಲಿ ಒಣ ತ್ವಚೆ ಸಾಮಾನ್ಯ. ಇದಕ್ಕೆ ಸರಳ ಹಾಗೂ ಸುಲಭ ಪರಿಹಾರ ವೆಂದರೆ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಬೇಯಿಸಿ. ನಂತರ ಆ ನೀರನ್ನು ನಿಮ್ಮ ದೇಹಕ್ಕೆ ಹಾಗೇ ಸವರಬಹುದು ಇಲ್ಲವೇ ಸ್ನಾನಕ್ಕೆ ಬಳಸುವ ನೀರಿಗೆ ಬೆರೆಸಿ ಸ್ನಾನ ಮಾಡಿ. ಒಣ ತ್ವಚೆ ಮಾಯವಾಗಿ ಚರ್ಮ ಸಾಮಾನ್ಯ ಸ್ಥಿತಿ ಗೆ ಬರುತ್ತದೆ. ಯಾವುದೇ ಕ್ರೀಮು ಗಳು ಬೇಕಿಲ್ಲ. ದುಡ್ಡು ಉಳಿತಾಯ ವಾಗುತ್ತದೆ.

ಕಣ್ಣ ತುದಿಯಲ್ಲಿ ತುರಿಕೆ ಉಂಟಾದರೆ, ದೃಷ್ಟಿ ಅಚಾನಕ್ಕಾಗಿ ಮಬ್ಬಾದರೆ ನೀವು ವಿಟಮಿನ್ ಎ ಕೊರತೆಯಿಂದ ಬಳಲುತ್ತೀರಿ ಎಂದು ಅರ್ಥ. ಅದಕ್ಕಾಗಿ ದಿನವೂ ಒಂದು ಕ್ಯಾರೆಟನ್ನು ಚೆನ್ನಾಗಿ ತೊಳೆದು ಹಸಿಯಾಗಿ ತಿನ್ನಿ, ಜೊತೆಗೆ ಒಂದು ತುಂಡು ಪಪ್ಪಾಯಿ ಕೂಡ ತಿಂದರೆ ಉತ್ತಮ.